Chanveer chakrasali GHS Bhatambra tq:Bhalki, dist:Bidar
ಚಟುವಟಿಕೆ -9
July 29, 2020
ಚಟುವಟಿಕೆ -9 [ ಲೇಖನ ]
****************************
🔹ಕೋವಿಡ್-19 ಹೋಗಲಾಡಿಸುವಲ್ಲಿ ದೈಹಿಕ ಶಿಕ್ಷಣದ ಮಹತ್ವ.....🔹
ಮನುಷ್ಯನ ಪೂರ್ಣ ವ್ಯಕ್ತಿತ್ವವನ್ನು ರೂಪಿಸಿ ಬೆಳೆಸುವುದೇ ಶಿಕ್ಷಣದ ಗುರಿ. ಮಾನಸಿಕ ಬೆಳವಣಿಗೆ,ಜ್ಞಾನದ ಬೆಳವಣಿಗೆಯ ಜೊತೆಜೊತಗೆ ಶಾರೀರಿಕ ಬೆಳವಣಿಗೆಯು ಅತ್ಯ ಅವಶ್ಯಕ ಎಂಬುದು ಈ ಕೋವಿಡ್-19 ವೈರಾಣುವಿನ ಪ್ರಯುಕ್ತ ಈಗ ಬೆಳಕಿಗೆ ಬಂದಿರುವುದು. ದೇಹದಾಡ್ಯತೆಯನ್ನು ಪಡೆಯಲು ಕ್ರೀಡಾ ಚಟುವಟಿಕೆಗಳು, ಆಟ ಪಾಠಗಳು, ಯೋಗಾಸನ, ಸಾಮೂಹಿಕ ಕವಾಯತು, ಹೇಗೆ ಹತ್ತು ಹಲವಾರು ಚಟುವಟಿಕೆಗಳು ಅತಿ ಮುಖ್ಯ. ಇವುಗಳನ್ನೆಲ್ಲಾ ಪ್ರತಿನಿತ್ಯ ಅಳವಡಿಸಿಕೊಂಡಾಗ ಮಾತ್ರ ಆರೋಗ್ಯವಂತನಾದ ವ್ಯಕ್ತಿಯು ನಿಜಕ್ಕೂ ನಿಶ್ಚಲವಾದ ಮನಸ್ಸನ್ನು ಹೊಂದಿ ನೆಮ್ಮದಿಯಿಂದ ಕರೋನಾ ಎಂಬ ವೈರಾಣುವಿಗೆ ಹೆದರುವ ಅವಶ್ಯಕತೆಯಿರುವುದಿಲ್ಲ.
ದೈಹಿಕ ಶಿಕ್ಷಣವು ಒಂದು ಮನೆ ಮದ್ದಿನಂತೆ ಕೆಲಸ ನಿರ್ವಹಿಸುತ್ತದೆ. ಶಿಕ್ಷಣಗಳ ರಾಜ ಎಂದರೂ ತಪ್ಪಾಗಲಿಕ್ಕಿಲ್ಲ. ಹೇಗೆ ಅಂತೀರಾ ಪುರಾತನ ಕಾಲದಿಂದಲೂ ಋಷಿಮುನಿಗಳು ಶಿಕ್ಷಣದ ಜೊತೆಗೆ ದೈಹಿಕ ಸದೃಢತೆಗೆ ಮಹತ್ವವನ್ನು ಕೊಡುತ್ತಿದ್ದರು. ನಮ್ಮ ಪೂರ್ವಜರು ಹಾಗಾಗಿಯೇ ಆ ಕಾಲದಲ್ಲಿ ಮಲ್ಲಗಂಬ, ಗರಡಿ ಶಾಲೆ, ಮಲ್ಲಯುದ್ಧ, ಕುಸ್ತಿ, ಬರ್ಚಿ ಎಸೆತ, ಧ್ಯಾನ, ಪ್ರಾಣಾಯಾಮ ಹೀಗೆ ಹತ್ತು ಹಲವಾರು ಕಸರತ್ತುಗಳಿಗೆ ಅವರು ಮಹತ್ವವನ್ನು ಕೊಡುತ್ತಿದ್ದರು. ಅದರ ಜೊತೆಗೆ ಉತ್ತಮ ಆಹಾರ ಪದ್ಧತಿಯ ಜೊತೆಗೆ ಮನೆಮದ್ದು ಗಳನ್ನು ಬಳಸಿಕೊಂಡು ಅವರು ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಬಂದಿರುವುದು ನಮ್ಮೆಲ್ಲರಿಗೂ ತಿಳಿದಿರುವ ವಿಷಯ. ಯಾವುದೇ ಕಾಯಿಲೆಗೆ ತುತ್ತಾದರು ಅವರು ಅದನ್ನು ಮನೆ ಮದ್ದುಗಳಿಂದಲೇ ಗುಣಮುಖರಾಗುವಂತೆ ಮಾಡುತ್ತಿದ್ದರು. ಅವರು ಬಳಸುವ ಕೆಲವೊಂದು ಮನೆ ಮದ್ದುಗಳು ಈ ಕೆಳಗಿನಂತಿವೆ.
◾️ ಆಯುರ್ವೇದದ ಪ್ರಕಾರ ಹೆಚ್ಚು ರೋಗ ನಿರೋಧಕ ಶಕ್ತಿ ಹೊಂದಿರುವ ಅಮೃತ ಬಳ್ಳಿ ಯಾವೆಲ್ಲ ರೋಗಗಳನ್ನು ಹೋಗಲಾಡಿಸುತ್ತೆ ಗೊತ್ತಾ..!
◾️ ಎಲ್ಲಾ ಬಗೆಯ ಜ್ವರಗಳಲ್ಲಿಯೂ ಅಮೃತಬಳ್ಳಿಯು ಉತ್ತಮ ಔಷಧಿಯಾಗಿ ಕೆಲಸ ಮಾಡುತ್ತದೆ. ಮಧುಮೇಹ ರೋಗಕ್ಕೆ ಔಷಧಿಯಾಗಿ ಬಳಸುತ್ತಾರೆ. ಅದರ ತಜಾ ಕಾಂಡವನ್ನು ಜಜ್ಜಿ , ಹಿಸುಕಿ ರಸ ತೆಗೆದು 2 ಚಮಚೆ ರಸವನ್ನು ಜೇನು ತುಪ್ಪದೊಂದಿಗೆ ಬೆರೆಸಿ ದಿನಕ್ಕ್ಕೆ 3 ಬಾರಿ ಆಹಾರ ಸೇವನೆಯ ಮುಂಚೆ ಕುಡಿಯ ಬೇಕು.
◾️ ಬಾಯಾರಿಕೆ, ವಾಂತಿ, ವಾಕರಿಕೆ: ಸುಮಾರು 25 ಗ್ರಾಂನಷ್ಟು ಅಮೃತಬಳ್ಳಿಯನ್ನು ಅರೆದು ಶುದ್ಧವಾದ ನೀರು ಹಾಕಿ ಕಾಯಿಸಿ ಕಷಾಯ ಮಾಡಿಟ್ಟುಕೊಳ್ಳುವುದು. ದಿನಕ್ಕೆ ಮೂರು ವೇಳೆ ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿಯುವುದು.
◾️ ಮೂತ್ರನಾಳದಲ್ಲಿ ಕಲ್ಲು: ಅಮೃತಬಳ್ಳಿ, ನೆಗ್ಗಿಲು, ಅಶ್ವಗಂಧ, ನೆಲ್ಲಿ, ಶುಂಠಿಯ ಸಮತೂಕ ನಯವಾಗಿ ಚೂರ್ಣ ಮಾಡಿಟ್ಟುಕೊಳ್ಳುವುದು. 10ಗ್ರಾಂನಷ್ಟು ಚೂರ್ಣವನ್ನು ಶುದ್ಧ ನೀರು ಹಾಕಿ ಕಷಾಯ ಮಾಡಿ ವೇಳೆಗೆ ಒಂದು ಟೀ ಚಮಚದಷ್ಟು ಕುಡಿಸುವುದು.
◾️ ಮೈಮೇಲೇಳುವ ಪಿತ್ತದ ಗಂಧೆಗಳು: ಅಮೃತಬಳ್ಳಿಯ ಎಲೆ ಸಾಸಿವೆ ಶ್ರೀಗಂಧದ ಚಕ್ಕೆ ಇವುಗಳ ಸಮತೂಕವನ್ನು ಎಮ್ಮೆಯ ಹಾಲಿನಲ್ಲಿ ಅರೆದು ಮೈಗೆ ಹಚ್ಚುವುದು. ಪಿತ್ತ ವಿಕಾರ ಕಡಿಮೆ ಆಗಿ ಪಿತ್ತದ ಗಂಧೆಗಳು ಮತ್ತು ನೆವೆ ಉರಿ ಶಮನವಾಗುವುದು.
◾️ ಹೊಟ್ಟೆ ಉರಿ: ಹಸಿಸೊಪ್ಪಿನ ರಸ 2 ಟೀ ಚಮಚದಷ್ಟು ಸ್ವಲ್ಪ ಓಂಪುಡಿ ಸೇರಿಸಿ ಮಜ್ಜಿಗೆಯಲ್ಲಿ ಕದಡಿ ಕುಡಿಯುವುದು.
◾️ ವಾತ ಜ್ವರದಲ್ಲಿ: ಅಮೃತಬಳ್ಳಿ ತ್ರಫಲ ಚೂರ್ಣ, ತುಂಗೇಗುಡ್ಡೆ ಕೊತ್ತಂಬರಿ, ಶತಾವರಿ, ಕಳ್ಳಂಗಡಲೆ ಮತ್ತು ಬೇಲದ ಬೇರು ಇವುಗಳ ಸಮತೂಕದಷ್ಟನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿಟ್ಟುಕೊಳ್ಳುವುದು. ಸ್ವಲ್ಪ ಚೂರ್ಣಕ್ಕೆ ಎರಡು ಬಟ್ಟಲು ನೀರು ಹಾಕಿ ಕಾಯಿಸಿ ಅರ್ಧ ಬಟ್ಟಲು ಕಷಾಯವನ್ನು ಮಾಡಿ ಆರಿಸಿ ಕುಡಿಯುವುದು.
◾️ ಬುದ್ಧಿ ಭ್ರಮಣೆಗೆ: ಹಸಿ ಅಮೃತಬಳ್ಳಿಯನ್ನು ತಂದು ತಣ್ಣನೆಯ ಹಾಲಿನಲ್ಲಿ ನುಣ್ಣನೆ ರುಬ್ಬಿ ತಲೆಗೆ ಪಟ್ಟು ಹಾಕುವುದು. ಒಂದೆರಡು ತಾಸುಗಳ ನಂತರ ಬಿಸಿ ನೀರಿನಿಂದ ಸ್ನಾನ ಮಾಡುವುದು.
◾️ ದೃಷ್ಟಿಮಾಂದ್ಯದಲ್ಲಿ: ಅಮೃತಬಳ್ಳಿ ತ್ರಿಫಲ ಚೂರ್ಣ, ಹಿಪ್ಪಲಿ ಸಮ ಪ್ರಮಾಣ ಸೇರಿಸಿ ಜಜ್ಜಿ ಕಷಾಯ ಮಾಡುವುದು. ಅರ್ಧ ಬಟ್ಟಲು ಕಷಾಯಕ್ಕೆ ಜೇನುತುಪ್ಪ ಸೇರಿಸಿ ಕುಡಿಯುವುದು.
◾️ ಬೊಜ್ಜು ಮತ್ತು ಕೊಬ್ಬು ಕಡಿಮೆ ಆಗಲು, ಆಯಸ್ಸು ಹೆಚ್ಚಲು: ಇದು ಪರಿಣಾಮಕಾರಿ ಔಷಧಿ. ಮೇಲಿನ ಕಷಾಯಕ್ಕೆ ಒಂದು ಗುಲಗಂಜಿಯಷ್ಟು ಲೋಹ ಭಸ್ಮವನ್ನು ಮತ್ತು ಟೀ ಚಮಚ ಜೇನು ತುಪ್ಪವನ್ನು ಕೂಡಿಸಿ ಸೇವಿಸುವುದು. ಸುಮಾರು 40 ದಿವಸ ಅರಳ ಅಂಗಸಾಧನೆ, ಕೊಬ್ಬು ರಹಿತ ಆಹಾರ, ತಣ್ಣೀರು ಸ್ನಾನ ಮತ್ತು ದೀರ್ಘ ನಡಿಗೆ ಅಭ್ಯಾಸ ಮಾಡಿಕೊಳ್ಳುವುದು.
ಈ ಮೇಲಿನ ಎಲ್ಲಾ ಮನೆಮದ್ದುಗಳನ್ನು ಮುಂದಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳು ವೈದ್ಯಕೀಯ ಸೌಕರ್ಯಗಳು ಪಡೆಯುವ ಜೊತೆ ಜೊತೆಯಲ್ಲಿ ಮನೆಯಲ್ಲಿ ಸಿಗುವ ವಸ್ತುಗಳನ್ನು ಅಥವಾ ತಿನಿಸುಗಳನ್ನು ಬಳಸಿಕೊಂಡು ಹೀಗೆ ಪ್ರಥಮ ಚಿಕಿತ್ಸೆಯನ್ನು ಮಾಡಬಹುದು ಎಂಬುದನ್ನು ಹೇಳಿಕೊಡಲಾಗುವುದು.
ಜಗತ್ತಿನಲ್ಲಿ ಯಾವುದೇ ಕೆಲಸವನ್ನು ನಾವು ಮಾಡಬೇಕು ಅಂದರೆ ಅಸಾಧ್ಯವಾದದ್ದನ್ನು ಸಾಧ್ಯ ಮಾಡುವ ಶಕ್ತಿಯೆಂದರೆ ಅದು ಪ್ರಯತ್ನ, ಪರಿಶ್ರಮ, ನಂಬಿಕೆ, ಆತ್ಮವಿಶ್ವಾಸ, ದೃಢನಿರ್ಧಾರ, ಇವುಗಳನ್ನು ಯಾರು ಅಳವಡಿಸಿಕೊಂಡಿರುತ್ತಾರೋ ಅವರು ಅಸಾಧ್ಯವಾದದ್ದನ್ನು ಖಂಡಿತ ಸಾಧ್ಯ ಮಾಡಿ ತೋರಿಸುತ್ತಾರೆ. ಇದೆಲ್ಲಾ ಯಾವಾಗ ಸಾಧ್ಯ? ನಮ್ಮ ಮಾನಸಿಕ ಸಾಮರ್ಥ್ಯ ಅಚಲವಾಗಿದ್ದಾಗ ಮಾತ್ರ ರೋಗ ಬರುವ ಮುಂಚೆ ಚಿಂತಾಜನಕನಾಗಿ ಮಾನಸಿಕ ಸ್ಥೈರ್ಯ ಕುಂದಿಸಿಕೊಂಡಾಗ ಈ ಕೋವಿಡ್ 19 ಅಂತಹ ವೈರಾಣು ದೇಹದಲ್ಲಿ ಪ್ರವೇಶ ಪಡೆಯಬಹುದು ಅಲ್ಲವೇ? " ಕದನ ಸಿಂಹ ನೆಪೋಲಿಯನ್ ಒಂದು ಮಾತು ಹೇಳುತ್ತಾರೆ. ಅದೇನಂದರೆ ಅಸಾಧ್ಯವೆನ್ನುವ ಪದ ನನ್ನ ಡಿಕ್ಷನರಿಯಲ್ಲಿ ಇಲ್ಲ" ಎಂದು ನೇಪೋಲಿಯನ್ ಹೇಳಿರುವುದು ಸತ್ಯವಾದ ಮಾತು. ಯಾರು ಮಾನಸಿಕ ಸ್ಥೈರ್ಯ ಕಳೆದುಕೊಳ್ಳುತ್ತಾರೋ ಅಲ್ಲಿ ರೋಗಗಳು ತಾನಾಗಿಯೇ ನಮ್ಮ ಮೇಲೆ ಆವರಿಸಿಕೊಳ್ಳುತ್ತವೆ. ಅದೇ ನಾವು ದಿನನಿತ್ಯ ಯೋಗಾಸನ, ಪ್ರಾಣಾಯಾಮ, ಬೆಳಗ್ಗೆಯ ವಾಕಿಂಗ್, ಹೀಗೆ ಎಲ್ಲಿ ಪರಿಶ್ರಮದ ಬೆವರಿನ ಹನಿಗಳು ಭೂಮಿಗೆ ಹರಿಯುತ್ತದೆಯೋ ಅಲ್ಲಿ ರೋಗಗಳು ಬರಲು ಅಸಾಧ್ಯವೆಂದು ಮಕ್ಕಳಿಗೆ ಸ್ಫೂರ್ತಿಯನ್ನು ತುಂಬುವುದು.
ತರಗತಿಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಒಂದೇ ತರಹ ಸಮಾನವಾಗಿ ಕಲಿಯಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಹಾಗೆ ಈ ರೋಗ ಕೂಡ ಆದರೇ ಅದು ಯಾವ ವ್ಯಕ್ತಿಯು ದೈಹಿಕವಾಗಿ, ಮಾನಸಿಕವಾಗಿ, ಸದೃಢರಾಗಿರುತ್ತಾರೋ ಅವರಿಗೆ ನೋಡಿ ಈ ಕರೋನಾ ಸಹ ಹೆದರಿ ಓಡಿ ಹೋಗುತ್ತದೆ.
ವಿದ್ಯಾರ್ಥಿ ಜೀವನದಲ್ಲಿ ಯೋಗ ತುಂಬಾ ಉಪಯೋಗಕಾರಿ. ನಾವು ಶಾಲೆಯಲ್ಲಿ ಯೋಗ ದಿನನಿತ್ಯ ರೂಡಿ ಮಾಡಿಕೊಂಡರೆ ನಮಗೆ ಉತ್ತಮ ಆರೋಗ್ಯದ ಜೊತೆಯಲ್ಲಿ ವಿದ್ಯಾರ್ಥಿಗಳ ಬುದ್ಧಿ ಶಕ್ತಿಯು ವೃದ್ಧಿಯಾಗುತ್ತಾ ಹೋಗುತ್ತದೆ. ಮೆದುಳು ಚುರುಕು ಗೊಳ್ಳುತ್ತದೆ. ಮನಸಿಗೆ ಹೊಸ ಚೈತನ್ಯವನ್ನು ಓದಿನಲ್ಲಿ ಆಸಕ್ತಿ ವೃದ್ಧಿಯಾಗುತ್ತಾ ಹೋಗುತ್ತದೆ. ಯೋಗದಿಂದ ಪ್ರಾಣಾಯಾಮ ಮಾಡುವುದರಿಂದ ಕೋಪದ ಮೇಲೆ ಯಾವುದೇ ಕಾಯಿಲೆಗಳು, ಇನ್ಫೆಕ್ಷನ್ಗಳು ಆಗದಂತೆ ಅವುಗಳನ್ನು ಎದುರಿಸುವ ಸಾಮರ್ಥ್ಯ ಬೆಳೆಯುತ್ತದೆ. ದಿನದ 24 ಗಂಟೆಗಳಲ್ಲಿ ಕೇವಲ 20 ನಿಮಿಷ ಯೋಗ ಮಾಡಿದರೆ ಸಾಕು. ನಮ್ಮ ದೇಹ ಹಾಗೂ ಮನಸ್ಸಿಗೆ ಸಂತೋಷದ ಜೊತೆಗೆ ಹಿತವನ್ನು ನೀಡುತ್ತದೆ. ಹಾಗಾಗಿಯೇ ಆರೋಗ್ಯ ಶಿಕ್ಷಣದ ಆರೋಗ್ಯದ ಹಿತದೃಷ್ಟಿಯಿಂದ ಯೋಗ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಪಠ್ಯಕ್ರಮದಲ್ಲಿಯೇ ಅಳವಡಿಸಿಕೊಳ್ಳಲಾಗಿದೆ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿ, 'ಯೋಗ ಮಾಡಿ ರೋಗ ದೂಡಿ' ಎಂಬ ಶ್ಲೋಕ ದಂತೆ ನಾವು ದಿನನಿತ್ಯ ಅಳವಡಿಸಿಕೊಳ್ಳಬೇಕು.
ನಿಸರ್ಗದ ಜೊತೆ ಬೆರೆತು ಬಾಳಿದರೆ ಪರಿಸರದ ತಾನಾಗಿಯೇ ಬದಲಾಗುತ್ತಾ ಹೋಗುತ್ತದೆ. ಶಿಕ್ಷಕರಾದವರು ವಿದ್ಯಾರ್ಥಿಗಳಿಗೆ ಪಾಠ ಬೋಧನೆಯ ಜೊತೆ ಜೊತೆ ನೈತಿಕತೆ ನಮ್ಮ ಸುತ್ತಮುತ್ತಲಿನ ಪರಿಸರ ಸಂರಕ್ಷಣೆ ಕುರಿತು ತಿಳುವಳಿಕೆ ನೀಡುತ್ತಿರಬೇಕು, ಶಾಲೆಯೆಂದರೆ ಒಂದು ಸಣ್ಣ ತೋಟವಾಗಿ ನೋಡುಗರಿಗೆ ಕಾಣಬೇಕು.ಆದರೆ ಇದು ಹೇಳಿದಷ್ಟು ಸುಲಭವಲ್ಲ, ಯಾಕೆಂದರೆ ಆಧುನಿಕ ಜಗತ್ತಿನಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನದ ದೆಸೆಯಿಂದ ಇಂದಿನ ಮಾನವನ ಜೀವನ ಮಾನವನು ಮೊದಲು ತನ್ನ ಬಗ್ಗೆ ಯೋಚಿಸುವುದನ್ನು ಕಲಿಯುತ್ತಿದ್ದಾನೆ ಹೀಗೆ ಮುಂದುವರೆದರೆ ಮುಂದೊಂದು ದಿನ ನೀರು ಖರೀದಿಸಿ ಕುಡಿದಂತೆ ವಾಯು ಸಹ ಖರೀದಿಸಿ ಶ್ವಾಸವಾಡುವ ಪರಿಸ್ಥಿತಿ ಬಂದೊದಗುವುದು. ಕೆಲವೊಮ್ಮೆ ಇದು ಮನುಷ್ಯನ ಉದಾಸೀನತೆ, ತಿಳಿಗೇಡಿತನ ಎಂದು ಕಂಡುಬಂದರೆ ಅನೇಕ ಸಲ ಇದರಲ್ಲಿ ಜನಸಾಮಾನ್ಯನ ದೈನಂದಿನ ಆದ್ಯತೆ, ಅನಿವಾರ್ಯತೆ ಹಾಗೂ ಅಸಹಾಯಕತೆಗಳು ಎದ್ದುಕಾಣುತ್ತವೆ. ಹೀಗಿರುವಾಗ ಬಹುಪಾಲು ಜನರಿಗೆ ಇಷ್ಟವಿಲ್ಲದಿದ್ದರೂ ಕೂಡ ನಮ್ಮ ಕಣ್ಣಮುಂದೆಯೇ ತಮ್ಮ ನಿತ್ಯ ಉಪಜೀವನಕ್ಕೆ ತೆರೆಮರೆಯಲ್ಲಿ ನಿಸರ್ಗ ಹಾಳಾಗುತ್ತಲೇ ಇದೆ. ಈ ಪ್ರಕ್ರಿಯೆಯಲ್ಲಿ ನಾವೆಲ್ಲರೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭಾಗೀದಾರರು ಎಂಬುದು ಕೂಡ ನಮಗೆಲ್ಲರಿಗೂ ಈಗ ಚೆನ್ನಾಗಿ ಗೊತ್ತಾಗಿರುವ ಕಟು ಸತ್ಯ. ಹಾಗಾಗಿ ವಿದ್ಯಾರ್ಥಿಗಳಿಗೆ ಸಧ್ಯ ಪರಿಸ್ಥಿತಿಯ ಅರಿವು ಮೂಡಿಸುವದು.
ಒಟ್ಟಾರೆ ಹೇಳಬೇಕಾದರೆ ಈ ಕೋವಿಡ್-19 ವೈರಾಣುವಿನ ಯಾರು ಹೆದರುವ ಅವಶ್ಯಕತೆ ಇಲ್ಲ. ನಮ್ಮ ಪುರಾತನ ಕಾಲದಲ್ಲಿ ಸಹ ಸಿಡುಬು, ಕಾಲರ, ಪ್ಲೇಗ, ಪೋಲಿಯೋ, ಟಾಯಿಫಾಡ, ಚಿಕನ್ ಗುನಿಯಾ, ಕಜ್ಜಿ, ಕಣ್ಣು ಬರುವುದು ಹೀಗೆ ಹತ್ತು ಹಲವಾರು ರೋಗಗಳು ಬರುತ್ತಿದ್ದವು. ಅವುಗಳು ಸಹ ಅಂಟುರೋಗಗಳೇ ! ಈ ಎಲ್ಲಾ ರೋಗಗಳ ವಿರುದ್ಧ ಹೋರಾಡಿ ಜಯ ಸಾಧಿಸಿದ ಪೂರ್ವಜರು ಹಾಗೂ ನಾವು ನೀವುಗಳು ಈ ಕರೋನಾಕ್ಕೆ ಹೇದರಬೇಕಾಗಿಲ್ಲ. ಆದರೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. ಸಾಮಾಜಿಕ ಅಂತರ ಕಾಪಾಡಿಕೊಂಡು, ವೈಯಕ್ತಿಕ ಸ್ವಚ್ಛತೆ ಯೊಂದಿಗೆ ಮುಖಕ್ಕೆ ಮಾಸ್ಕ್ ದರಿಸಿದರೆ ಕರೋನಾ ನಮ್ಮ ಹತ್ತಿರ ಸುಳಿದಾಡುವುದು ಸಾಧ್ಯಾನಾ? ಹಾಗೆಯೇ ನಿಮಗೆ ಒಂದು ವಿಷಯ ಹೇಳಲು ಇಚ್ಛಿಸುವೆ ನಮ್ಮ ದೇಶದಲ್ಲಿ 18 ಕೋಟಿ ಜನರಿಗೆ ಕರೋನಾ ಬಂದು ಹೋಗಿರುವುದೇ ಗೊತ್ತಾಗಲಿಲ್ಲ. ಇದೆಲ್ಲ ಯಾವಾಗ ಸಾಧ್ಯ. ನಾವು ದೈಹಿಕವಾಗಿ ನಮ್ಮ ಶರೀರಕ್ಕೆ ದಂಡಿಸಿ ದಾಗ ಮಾತ್ರ ನಮ್ಮಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತದೆ." ಆರೋಗ್ಯವೇ ಭಾಗ್ಯ" ಎಂಬಂತೆ ಎಷ್ಟೇ ದುಡ್ಡು ಇದ್ದರು ಆರೋಗ್ಯವನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ವಿದ್ಯಾರ್ಥಿಗಳ ಆದವರು ಹಾಗೆ ನಾವುಗಳು ನಮ್ಮ ಸಮಾಜ ಎಲ್ಲರೂ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಲು ನಮ್ಮ ದೈಹಿಕ ಶಿಕ್ಷಣ ಸಹಾಯಕಾರಿ.
ಚನವೀರಪ್ಪ ಚಕ್ರಸಾಲಿ
ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-1
ಸರಕಾರಿ ಪ್ರೌಢ ಶಾಲೆ ಭಾತಂಬ್ರಾ, ತಾ:ಭಾಲ್ಕಿ, ಜಿ:ಬೀದರ್.